ಬಹುಶ: 1996ರಲ್ಲಿ ಕನ್ನಡದ `ಡಿ.ಡಿ.-1' ರಲ್ಲಿ ಆಗಾಗ ಪ್ರಸಾರವಾಗುತ್ತಿದ್ದ ಈ ಕೆಳಗಿನ ಹಾಡು ನನ್ನ ಮನ ಸೆಳೆದಿತ್ತು. ಆಗಿನ್ನೂ `ಸರ್ವಶಿಕ್ಷಣ ಅಭಿಯಾನ' ಯೋಜನೆ ಆರಂಭವಾಗಿರಲಿಲ್ಲ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಪ್ರಾಧಾನ್ಯತೆ ಇರಲಿಲ್ಲ. ಉತ್ತರ ವೇದಗಳ ಕಾಲದಲ್ಲಿ ಆರಂಭವಾದ ಹೆಣ್ಣು ಮಕ್ಕಳ ಶೋಷಣೆಗಳಲ್ಲಿ ಒಂದಾದ `ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನಿಷೇಧ'ವೆಂಬ ಅಲಿಖಿತ ಸಾಮಾಜಿಕ ನಿಯಮ ಇಪ್ಪತ್ತನೆಯ ಶತಮಾನದ ಅಂತ್ಯದವರೆಗೂ ನಡೆದುಬಂದಿದ್ದು ವಿಷಾದಕರ ಸಂಗತಿ. ಅಂಥ ಸಂದರ್ಭದಲ್ಲಿ ಮೂಡಿ ಬಂದಿದ್ದೇ ಈ ಗೀತೆ. ಈಗಲೂ ಕೂಡ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ನಾವೆಲ್ಲ ಅಂಥ ಹೆಣ್ಣು ಮಕ್ಕಳನ್ನು ಗುರುತಿಸಿ ಶಿಕ್ಷಣ ಪಡೆಯುವಂತೆ ಮಾಡಬೇಕಾಗಿದೆ. ಇದಕ್ಕೆ ನಿಮ್ಮ ಸಹಕಾರವೂ ಇದೆ ಎಂದು ಭಾವಿಸುತ್ತೇನೆ.
ಓಡಿಯಾಡೊ ಹೆಣ್ಣು ಮಗು ಮುಖ
ಬಾಡಿ ಏಕೆ ನಿಂತಿಹುದು
ಕುಣಿದಾಡಿ ಆಡೋ ವೇಳೆ ಹಲ ಭಾರಗಳ ಹೊತ್ತಿಹುದು.
ಈ ಎಳೆ ಮಲ್ಲಿಗೆ ಬಾಲೆ
ಹಲ ಹೊರೆಯು ಇವಳ ಮೇಲೆ
ಅದು ನೆನೆದು ನೆನೆದು ಕೊರಗಿ ಮನಸು ಮುಳ್ಳಿನ ಮಾಲೆ ||ಪಲ್ಲವಿ||
ತಾಯಿ ಜೊತೆ ಮನೆಗೆಲಸ
ಮಗಳಿಗೆ ಪ್ರತಿ ದಿವಸ
ತಿರೋಗದಿ ಮಲಗಿದರೆ
ಪಕ್ಕದಲ್ಲಿ ಪ್ರತಿನಿಮಿಷ
ಬಾಗಿಲಿಗೆ ನೀರು ಹಾಕಿ ಹಸುಗಳಿಗೆ ಹುಲ್ಲು ಹಾಕಿ
ಪಾತ್ರೆ ತೊಳೆಯ ಬಟ್ಟೆ ಒಗೆಯ
ಹುಟ್ಟಿಸಿದನೆ ಬ್ರಹ್ಮ ಇವಳನು ||೧||
ಶಾಲೆಯ ಪಾಠವೆಲ್ಲ ಇವಳಿಗೆ ಸಾಕಂತೆ
ಅಳುವ ಮಕ್ಕಳ ಹೊತ್ತು ಆಡಿಸಿರಬೇಕಂತೆ
ಗಂಡು ಮಗು ಕೊಡುವದೇನು?
ಹೆಣ್ಣಿವಳು ಕಳೆವುದೇನು?
ಗಂಡಿಗೆ ಹೆಣ್ಣು ತಾನು ಕಡಿಮೆಯಲ್ಲ
ಕೀಳು ತಾನಲ್ಲ ||೨||
ಕೊಂಡಾಟ ಚೆಲ್ಲಾಟ ಗಂಡಿಗೆ ಸ್ವಂತವಂತೆ
ಸಂಸಾರ ಭಾರವೆಲ್ಲ ಹೆಣ್ಣಿಗೆ ಮೀಸಲಂತೆ
ಆಸೆಗಳೆಲ್ಲ ಗಂಡಸಿಗೆ ಗುಲಾಮಗಿರಿ ಹೆಂಗಸಿಗೆ
ಇದನು ನಾವು ಬದಲಿಸೋಣ
ಬಾಳಿಸೋಣ ಬನ್ನಿ ಸ್ತ್ರೀಯರನ್ನ ||೩||
ಬರೆದವರು : ಗುರುಪ್ರಸಾದ್ ಎಸ್ ಹತ್ತಿಗೌಡರ
ಓಡಿಯಾಡೊ ಹೆಣ್ಣು ಮಗು ಮುಖ
ಬಾಡಿ ಏಕೆ ನಿಂತಿಹುದು
ಕುಣಿದಾಡಿ ಆಡೋ ವೇಳೆ ಹಲ ಭಾರಗಳ ಹೊತ್ತಿಹುದು.
ಈ ಎಳೆ ಮಲ್ಲಿಗೆ ಬಾಲೆ
ಹಲ ಹೊರೆಯು ಇವಳ ಮೇಲೆ
ಅದು ನೆನೆದು ನೆನೆದು ಕೊರಗಿ ಮನಸು ಮುಳ್ಳಿನ ಮಾಲೆ ||ಪಲ್ಲವಿ||
ತಾಯಿ ಜೊತೆ ಮನೆಗೆಲಸ
ಮಗಳಿಗೆ ಪ್ರತಿ ದಿವಸ
ತಿರೋಗದಿ ಮಲಗಿದರೆ
ಪಕ್ಕದಲ್ಲಿ ಪ್ರತಿನಿಮಿಷ
ಬಾಗಿಲಿಗೆ ನೀರು ಹಾಕಿ ಹಸುಗಳಿಗೆ ಹುಲ್ಲು ಹಾಕಿ
ಪಾತ್ರೆ ತೊಳೆಯ ಬಟ್ಟೆ ಒಗೆಯ
ಹುಟ್ಟಿಸಿದನೆ ಬ್ರಹ್ಮ ಇವಳನು ||೧||
ಶಾಲೆಯ ಪಾಠವೆಲ್ಲ ಇವಳಿಗೆ ಸಾಕಂತೆ
ಅಳುವ ಮಕ್ಕಳ ಹೊತ್ತು ಆಡಿಸಿರಬೇಕಂತೆ
ಗಂಡು ಮಗು ಕೊಡುವದೇನು?
ಹೆಣ್ಣಿವಳು ಕಳೆವುದೇನು?
ಗಂಡಿಗೆ ಹೆಣ್ಣು ತಾನು ಕಡಿಮೆಯಲ್ಲ
ಕೀಳು ತಾನಲ್ಲ ||೨||
ಕೊಂಡಾಟ ಚೆಲ್ಲಾಟ ಗಂಡಿಗೆ ಸ್ವಂತವಂತೆ
ಸಂಸಾರ ಭಾರವೆಲ್ಲ ಹೆಣ್ಣಿಗೆ ಮೀಸಲಂತೆ
ಆಸೆಗಳೆಲ್ಲ ಗಂಡಸಿಗೆ ಗುಲಾಮಗಿರಿ ಹೆಂಗಸಿಗೆ
ಇದನು ನಾವು ಬದಲಿಸೋಣ
ಬಾಳಿಸೋಣ ಬನ್ನಿ ಸ್ತ್ರೀಯರನ್ನ ||೩||
ಬರೆದವರು : ಗುರುಪ್ರಸಾದ್ ಎಸ್ ಹತ್ತಿಗೌಡರ
No comments:
Post a Comment